== ಹಿನ್ನೆಲೆ == ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ) , ಭಾರತೀಯ ಜನತಾ ಪಕ್ಷ (ಬಿಜೆಪಿ), ಜನತಾ ದಳ (ಸೆಕ್ಯುಲರ್) (ಜೆಡಿ (ಎಸ್)), ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮತ್ತು ಬಿ ಶ್ರೀರಾಮುಲುಅವರ, 'ಬಡವರ ಶ್ರಮಿಕರ ರೈತರ ಕಾಂಗ್ರೆಸ್'(). : ಈ ಐದು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಂಡವು. ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು. [2] ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಬಹುಮತಕ್ಕೆ ಬೇಕಾದ 113. [1] [3] ಕ್ಕೂ ಹೆಚ್ಚಾಗಿ 9 ಹೆಚ್ಚು ಮತಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು. [4]5] == ಪ್ರಚಾರ == == ೨೦೧೩/ 2013ಕರ್ನಾಟಕ ವಿಧಾನ ಸಭಾ ಫಲಿತಾಂಶ ವಿವರ == ಮತದಾನ ೫-೫-೨೦೧೩/5-5-2013 ; ಎಣಿಕೆ ೮-೫-೨೦೧೩/8-5-2013 ಸ === ಪರಿಷ್ಕೃತ === ಪರಿಷ್ಕೃತ : ಬಿಆರ್ ಎಸ್ ಕಾಂಗ್ರೆಸ್ಸ್ 4 ಸದಸ್ಯರು ; ಕರ್ನಾಟಕ ಮಕ್ಕಳ ಪಕ್ಷ 1; ಕರ್ನಾಟಕ ಪಕ್ಷ 1 ; ಸ್ಮಾಜವಾದಿ ಪಾರ್ಟಿ 1 ; ಪಕ್ಷೇತರು 9 ; ಕಾಂ = 122 ; + ಬಿ ಜೆ ಪಿ =40; + ಜೆ ಡಿ (ಎಸ್)= 40; + ಕ ಜ ಪಾ = 6 ;+ ಇತರರು = 16 (17?) ; 224 (225 ?) 2014 ರ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ 21-8-2014ರಂದು ಚುನಾವಣೆ ನೆಡೆದು 25-8-2014ರಂದು ಎಣಿಕೆಯಾಗಿ ಫಲಿತಾಂಶ ಪ್ರಕಟವಾಯಿತು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಓಬಳೇಶ್ ವಿರುದ್ಧ 33,104ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಎನ್.ವೈ. ಗೋಪಾಲಕೃಷ್ಣ ಅವರು 83899 ಮತ ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಓಬಳೇಶ್ ಅವರು 50795 ಮತ ಗಳಿಸಿದ್ದಾರೆ.ಶೇ. 73.31 ರಷ್ಟು ಮತದಾನವಾಗಿತ್ತು.(ಬಿಜೆಪಿಯ ಶ್ರೀರಾಮುಲು ಯಿಂದ ತೆರವಾದ ಸ್ಥಾನ) ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್‌ನ ಎಚ್.ಎಸ್. ಶಾಂತವೀರಪ್ಪಗೌಡ ವಿರುದ್ಧ 6430 ಮತಗಳ ಕಡಿಮೆ ಅಂತರದ ಪ್ರಯಾಸದ ಗೆಲುವು ಪಡೆದಿದ್ದಾರೆ.ಬಿ.ವೈರಾಘವೇಂದ್ರ ಅವರು 71547 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಎಚ್. ಎಸ್. ಶಾಂತವೀರಪ್ಪ ಗೌಡ ಅವರು 65117 ಮತಗಳಿಸಿದ್ದಾರೆಶೇ. 78.26 ರಷ್ಟು ಮತದಾನವಾಗಿತ್ತು. (ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾದ ಸ್ಥಾನ) ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು 31820 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಪ್ರಕಾಶ ಹುಕ್ಕೇರಿ ಅವರು 94636 ಮತ ಗಳಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು 62816 ಮತ ಗಳಿಸಿದ್ದಾರೆ.ಶೇ. 85.5 ರಷ್ಟು ದಾಖಲೆಯ ಮತದಾನವಾಗಿತ್ತು. (ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಯಿಂದ ತೆರವಾದ ಸ್ಥಾನ) == ಸದಸ್ಯರ ಜಾತಿವಾರು ಪಟ್ಟಿ == ಕನ್ನಡಕ್ಕೆ ಅನುವಾದಿಸಲಾಗುವುದು (ಅನುವಾದಿಸಿ) 2013 ಕರ್ನಾಟಕ ಅಸೆಂಬ್ಲಿ --ಜಾತಿವಾರು 7.ಖಮರುಲ್ ಇಸ್ಲಾಂ ಧರ್ಮ; ರೋಶನ್ ಬೇಗ್; ತನ್ವೀರ್ ಶೇಟ್ ;; 9 ಕ.ಜೆ. ಜಾರ್ಜ್; 11. ಅಭಯ ಚಂದ್ರ 6. ಕಾಗೋಡು; ಮಾಲಿಕಯ್ಯಾ ಗುತ್ತೇದಾರ್; ವಿನಾಯಕುನ್ ಮಾರ್ ಸೊರಕೆ;ವಸಂತ ಬಂಗೇರ; ಗೋಪಾಲ ಪೂಜಾರಿ; 6. ಕುರುಬ: -ಬಿ.ಬಿ.ಚಿಮ್ಮನ್ ಕತ್ತಿ ಕತ್ತಿ; ಎಚ್.ವೈ.ಮೇಟಿ; ಎಂಟಿವಿ ನಾಗರಾಜ್; ಸಿ ಎಸ್ ಶಿವಳ್ಳಿ;ಬೈರತಿ ಬಸವರಾಜ; ಕೆ.ರಾಘವೇಂದ್ರ ಹಿತ್ನಾಳ್; ಜಿ ಎಚ್ ಶ್ರೀನಿವಾಸ್; ಎಂ ಕೆ ಸೋಮಶೇಖರ್; 6 ಗಂಗಾ ಮತ: -. ಪ್ರಮೋದ ಮಧ್ವ ರಾಜ್; ಬಾಬುರಾವ್ ಚಿಂಚನನೂರ; 6.ಉಪ್ಪಾರ: -ಪುಟ್ಟರಂಗ ಶೆಟ್ಟಿ ; 6. ನೇಕಾರ-: -ಉಮಾಶ್ರೀ- ; 10. ಎಚ್ ಪಿ ಮಾಂಜ್; == 2016 ರ ಉಪಚುನಾವಣೆ == 2016 ಫೆಬ್ರುವರಿ 13ರಂದು ರಾಜ್ಯದ ಹೆಬ್ಬಾಳ, ದೇವದುರ್ಗ. ಬೀದರ ಈ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ. ಹೆಬ್ಬಾಳವು ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿತ್ತು. ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ದೇವದುರ್ಗ ಕ್ಷೇತ್ರವು ಖಾಲಿಯಾಗಿತ್ತು. ಬೀದರ್ನಲ್ಲಿ ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. 2016 ಫೆಬ್ರುವರಿ 13ರಂದು ಉಪ ಚುನಾವಣೆ ನಡೆದಿದ್ದು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಂಗಳವಾರ 16-02-2016 ಮತ ಎಣಿಕೆ ನಡೆಯಿತು. ಈ ಚುನಾವಣೆಯಿಂದ ಪಕ್ಷಗಳ ಬಲಾಬಲ ಬದಲಾಗಿಲ್ಲ. ಮುಖ್ಯ ಅಭ್ಯರ್ಥೀಗಳು : 1.ಹೆಬ್ಬಾಳದಲ್ಲಿ ಕಾಂಗ್ರೆಸ್‌ನಿಂದ ರೆಹಮಾನ್ ಷರೀಫ್‌, ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್‌, ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ. 2. ದೇವದುರ್ಗಸ್ಥಾನದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಕೆ.ಶಿವನಗೌಡ ನಾಯಕ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ / ಕರೆಮ್ಮ ನಾಯಕ್ 3. ಬೀದರ್ನಲ್ಲಿ ಕಾಂಗ್ರೆಸ್‌ನ ರಹೀಂ ಖಾನ್‌; ಪ್ರಕಾಶ್ ಖಂಡ್ರೆ ಬಿಜೆಪಿ ಅಭ್ಯರ್ಥಿ; ಮೊಹಮ್ಮದ್ ಅಯಾಜ್‌ ಖಾನ್‌ ಜೆಡಿಎಸ್‌`ನಅಭ್ಯರ್ಥಿ ಫಲಿತಾಂಶ: ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ವಿವರ ಆಧಾರ:[೨] == ಕ.ಸರ್ಕಾರದ ಅಂತರಜಾಲ ತಾಣ == ಪಕ್ಷಗಳ ಬಲಾಬಲ (೨೦೧೪?) == ವಿಧಾನಸಭೆ ಉಪಚುನಾವಣೆ ೨೦೧೭ == ಉಭಯ ಕ್ಷೇತ್ರಗಳಲ್ಲಿ ಮಾರ್ಚ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಮಾರ್ಚ್ 21ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 22 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮಾರ್ಚ್ 24 ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಆಗಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಉಪ ಚುನಾವಣೆ,ಮತದಾನ ಉಭಯ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ. 2017 ಏಪ್ರಿಲ್ 9 ನಂಜನಗೂಡಿನಲ್ಲಿ ದಾಖಲೆಯ ಶೇ 77.56, ಗುಂಡ್ಲುಪೇಟೆಯಲ್ಲಿ ಶೇ 87.10ರಷ್ಟು ಮತ ಚಲಾವಣೆ ಆಗಿದೆ. ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು. 12 , 2017; ೧.ನಂಜನಗೂಡಿನಿಂದ ಆರಿಸಲ್ಪಟ್ಟಿದ್ದ ಶ್ರೀನಿವಾಸ ಪ್ರಸಾದ್ ಕಾಂ,ಕಮದಾಯ ಸಚವರಾಗಿದ್ದವರು- ಮಂತ್ರಿಮಂಡಲ ಪನರ್ರಚನೆಯಲ್ಲ ಕೈಬಿಟ್ಟಿದ್ದರಿಂದ, ಪ್ಷಕ್ಕೂ ಶಾಸನಸಭೆ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರಿಂದ "ನಂಜನಗೂಡು ಕ್ಷೇತ್ರಕ್ಕೆ ಉಪಚುನಾವಣೆ:ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧೆ. ೨. ಎಚ್‌.ಎಸ್‌. ಮಹದೇವಪ್ರಸಾದ್‌ ನಿಧನದಿಂದ ತೆರವಾದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಪತ್ನಿ ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) ಅವರೇ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಮಹದೇವಪ್ರಸಾದ್‌ ವಿರುದ್ಧ 2 ಬಾರಿ ಸ್ಪರ್ಧಿಸಿ ಸೋತಿರುವ ಸಿ.ಎಸ್‌. ನಿರಂಜನ್‌ಕುಮಾರ್‌ ಅವರೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. === ನಾಮಪತ್ರ ಸಲ್ಲಿಕೆ === 21 , 2017ಮಂಗಳವಾರ; ದಿ.೨೦ ಸೋಮವಾರ ನಂಜನಗೂಡು ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಕಳಲೆ ಎನ್‌.ಕೇಶವಮೂರ್ತಿ ಹಾಗೂ ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ವೇಗ ಪಡೆದಿದೆ. ಜೆಡಿಎಸ್ ಸ್ಪರ್ಧಿಸುತ್ತಿಲ್ಲ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಎಂ.ಸಿ.ಮೋಹನ್‌ ಕುಮಾರಿ (ಗೀತಾ ಮಹದೇವಪ್ರಸಾದ್‌), ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಸ್‌.ನಿರಂಜನ್‌ ಕುಮಾರ್‌ ನಾಮಪತ್ರ ಸಲ್ಲಿಸಿದರು. ==== ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ==== 1952ರಲ್ಲಿ ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿ (ಎಚ್.ಡಿ.ಕೋಟೆ ಒಳಗೊಂಡಂತೆ) ಅಸ್ತಿತ್ವಕ್ಕೆ ಬಂದಿತು. 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಜನತಾದಳ, ಜೆಡಿಯು, ಜೆಡಿಎಸ್‌ ತಲಾ ಒಂದು ಬಾರಿ ಗೆದ್ದಿವೆ. 4 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಗೆದ್ದಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ.ಕ್ಷೇತ್ರದಲ್ಲಿ ಲಿಂಗಾಯತರನ್ನು ಹೊರತುಪಡಿಸಿದರೆ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಬಲಗೈ’ ಸಮುದಾಯದವರು ಹೆಚ್ಚಿದ್ದಾರೆ. ಎಚ್‌.ಎಸ್‌.ಮಹದೇವಪ್ರಸಾದ್‌ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನ್‌ಕುಮಾರಿ 2 ಬಾರಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿರುವ ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನ್‌ಕುಮಾರ್‌ ಪ್ರಸ್ತುತ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಮಹದೇವಪ್ರಸಾದ್‌ ಅವರು 5 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಒಟ್ಟು ಮತದಾರರು ಎರಡು ಲಕ್ಷ (2,00,862);ಪುರುಷರು ಒಂದು ಲಕ್ಷ (1,00,144); ಮಹಿಳೆಯರು ಒಂದು ಲಕ್ಷ (1,00,701); ತೃತೀಯರು-17 ;;ಮತಗಟ್ಟೆ 250 === ನಂಜನಗೂಡು ಕ್ಷೇತ್ರ === ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಳಲೆ ಎನ್.ಕೇಶವಮೂರ್ತಿ ಅವರ ಬಳಿ ಪಾನ್ ಕಾರ್ಡ್ ಇಲ್ಲ. ಆದಾಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿಲ್ಲ. ಆದರೆ, ಇವರ ಬಳಿ ರೂ.34.31 ಲಕ್ಷ ಚರಾಸ್ತಿ ಹಾಗೂ ರೂ.90 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ವಿವಿಧ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ರೂ. 12.25 ಲಕ್ಷ ಸಾಲವನ್ನೂ ಪಡೆದಿದ್ದಾರೆ. ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಯಾವುದೇ ಮೇಲ್ ಐಡಿ ಹೊಂದಿಲ್ಲ. ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಳಿ ರೂ. 3.33 ಕೋಟಿ ಹಾಗೂ ಪತ್ನಿಯ ಬಳಿ ರೂ. 10.60 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪ್ರಸಾದ್ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ವೃತ್ತಿ ವ್ಯವಸಾಯವಾದರೆ, ಶ್ರೀನಿವಾಸಪ್ರಸಾದ್ ಅವರು ಅಡುಗೆ ಅನಿಲ ವಿತರಕರಾಗಿದ್ದಾರೆ. ಮತದಾರರ ವಿವರ: ಒಟ್ಟು ಮತದಾರರು: 2,01,818 ; ಪುರುಷರು : 1,01,930; ಮಹಿಳಯರು: 99,888; ತೃತೀಯ ಲಿಂಗಿಗಳು:08 ಆಭ್ಯರ್ಥಿಗಳು : ಒಟ್ಟು 11 ; ಒಟ್ಟು ಮತಗಟ್ಟೆ 236 ; ಸೂಕ್ಷ್ಮ 124 ; ಅತಿ ಸೂಕ್ಷ್ಮ 72;ಸಾಮಾನ್ಯ : 40; ==== ಹಿಂದಿನ ಚುನಾವನೆಗಳು ==== ==== ಫಲಿತಾಂಶ ==== ಕಳಲೆ ಕೇಶವಮೂರ್ತಿ ಕಾಂಗ್ರೆಸ್ :86,212 -ಗೆಲವು ಶ್ರೀನಿವಾಸ ಪ್ರಸಾದ್ ಬಿಜೆಪಿ :64,878 ಸೋಲು : 1665 ಅಂತರ : 21334 === ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ: === ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) - ಗೀತಾ ಅವರಿಗೆ 56 ವರ್ಷ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನೋವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. 43 ವರ್ಷದ ನಿರಂಜನ್‌ಕುಮಾರ್ ಬಿ.ಕಾಂ ಪದವೀಧರ. ಗೀತಾ ವೃತ್ತಿಯಲ್ಲಿ ಕೃಷಿಕರು. ಒಟ್ಟು ರೂ. 1.53 ಕೋಟಿ ಆಸ್ತಿ ಹೊಂದಿದ್ದಾರೆ. ನಿರಂಜನ್‌ಕುಮಾರ್ ವ್ಯವಸಾಯ ಮಾಡುತ್ತಿದ್ದು, ರೂ. 2.86 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ==== ಫಲಿತಾಂಶ ==== 13 , 2017; ಡಾ.ಎಂ.ಸಿ. ಮೋಹನ್‌ಕುಮಾರಿ(ಗೀತಾ ಮಹದೇವಪ್ರಸಾದ್‌) : 90,258 ಮತ; ಗೆಲವು. ನಿರಂಜನ್‌ಕುಮಾರ್, ಬಿಜೆಪಿ: 79,381 ಸೋಲು; ನೋಟಾ : 1596 ಅಂತರ : 10,887 ಮತಗಳು ಕಾಂಗ್ರೆಸ್‌ ಕೈಹಿಡಿದ ಮತದಾರ, ಮುದುಡಿತು ಕಮಲ;ವೈ.ಗ. ಜಗದೀಶ್‌;13 , 2017 == ಕರ್ನಾಟಕ ರಾಜ್ಯ ಮಂತ್ರಿ ಮಂಡಲ ೨೦೧೩ == ನೋಡಿ : ಕರ್ನಾಟಕ ಸರ್ಕಾರ 5-5-2013;ಮತದಾನ 8-5-2013-ಎಣಿಕೆ ( 8-5-2013) 13-5-2013ಮುಖ್ಯ ಮಂತ್ರಿ ಯಾಗಿ ಪ್ರಮಾಣವಚನ ಸ್ವೀಕಾರ 18-5-2013 ಸಂಪುಟ ವಿಸ್ತರಣೆ ದಿ.13-5-2013 ರಂದು ಮುಖ್ಯ ಮಂತ್ರಿಯಾಗಿ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು ಪುನಃ ಅಕ್ಟೋಬರ ೨೦೧೫ ರಲ್ಲಿ ಸಂಪುಟ ವಿಸ್ತರಣೆಯಾಯಿತು. ಸಿದ್ದರಾಮಯ್ಯ:ಮುಖ್ಯ ಮಂತ್ರಿ === ಸಂಪುಟ ಸದಸ್ಯರು (ಮಂತ್ರಿಮಂಡಳ) === ಸಚಿವರ ಖಾತೆಗಳ ವಿವರ ಕೆಳಗಿನಂತಿದೆ: == ಎರಡನೇಬಾರಿ ಪುನರ್`ರಚನೆ == ೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1.ಖಮರುಲ್ಲ ಇಸ್ಲಾಂ, 2.ಶ್ರೀನಿವಾಸ ಪ್ರಸಾದ್, 3.ವಿನಯ್‌ಕುಮಾರ್ ಸೊರಕೆ, 4.ಅಂಬರೀಶ್, 5.ಶಾಮನೂರು ಶಿವಶಂಕರಪ್ಪ, 6.ಕಿಮ್ಮನೆ ರತ್ನಾಕರ, 7.ಶಿವರಾಜ್ ತಂಗಡಗಿ, 8.ದಿನೇಶ್ ಗುಂಡೂರಾವ್, 9.ಪರಮೇಶ್ವರ್ ನಾಯಕ್, 10.ಯು.ಟಿ.ಖಾದರ್, 11.ಅಭಯ್‌ಚಂದ್ರ ಜೈನ್, 12.ಬಾಬುರಾವ್ ಚಿಂಚನಸೂರ್, 13.ಎಸ್.ಆರ್.ಪಾಟೀಲ್ ಅವರುಗಳನ್ನು ಸಂಪುಟದಿಂದ ಕೈ ಬಿಡಲಾಗಿದೆ. ==== ಖಾತೆ ಹಂಚಿಕೆ ==== 21-6-2016 ಮಂಗಳವಾರ:13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ) ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು ಆರ್. ವಿ. ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ ರೋಶನ್ ಬೇಗ್: ನಗರಾಭಿವೃದ್ಧಿ ಹಾಗೂ ಹಜ್ ಖಾತೆ ಹೊಸ ಸಚಿವರು ಸಂಪುಟ ದರ್ಜೆ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ ರಮೇಶ್ ಕುಮಾರ್: ಆರೋಗ್ಯ ಖಾತೆ ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ ಎಚ್.ವೈ. ಮೇಟಿ : ಅಬಕಾರಿ ತನ್ವೀರ್ ಸೇಠ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಖಾತೆ ಹಾಗೂ ವಕ್ಫ್ ಸಂತೋಷ್ ಲಾಡ್: ಕಾರ್ಮಿಕ ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ ಎಂ.ಆರ್ ಸೀತಾರಾಂ: ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನಾ ಎಸ್.ಎಸ್ ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ ರಾಜ್ಯ ಸಚಿವರು ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಈಶ್ವರ ಖಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ == ಜಾತಿವಾರು ವಿಂಗಡಣೆ == ಮಂತ್ರಿಗಳು (ಇನ್ನೊಬ್ಬರ ವಿವರ ಬೇಕು) ಆಧಾರ: == ಕರ್ನಾಟಕ ಮಂತ್ರಿಮಂಡಲ ಪುನರ್ರಚನೆ == 2015 ಅಕ್ಟೋಬರ್ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್‌ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಸಂಪುಟ ಸೇರಿದರು. ಸಂಪುಟ ಸೇರಿದ ಪರಮೇಶ್ವರ ಅವರು 2013ರ ವಿಧಾನಸಭೆ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದ್ದರು. 2014ರ ಜುಲೈ 1ರಂದು ಪರಮೇಶ್ವರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಪರಮೇಶ್ವರ ಅವರು ಅಕ್ಟೋಬರ್ 29ರ ಗುರುವಾರ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅಂದೇ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು.ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆ ಕೊಡಲಾಗಿದೆ. === ಸಂಪುಟ ದರ್ಜೆ === ಸಿದ್ದರಾಮಯ್ಯ: ಹಣಕಾಸು, ಗುಪ್ತಚರ, ಮಧ್ಯಮ ಕೈಗಾರಿಕೆ, ಮುಜರಾಯಿ ರಾಮಲಿಂಗಾ ರೆಡ್ಡಿ : ಗೃಹ ಖಾತೆ ಆರ್ ವಿ ದೇಶಪಾಂಡೆ ಕೈಗಾರಿಕೆ, ಪ್ರವಾಸೋದ್ಯಮ ಖಮರುಲ್ ಇಸ್ಲಾಂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ ಟಿ ಬಿ ಜಯಚಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ ರಮಾನಾಥ ರೈ ಅರಣ್ಯ, ಪರಿಸರ ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್ ರಾಮಲಿಂಗರೆಡ್ಡಿ ಸಾರಿಗೆ ಶಾಮನೂರು ಶಿವಶಂಕರಪ್ಪ ತೋಟಗಾರಿಕೆ ಶ್ರೀನಿವಾಸ್ ಪ್ರಸಾದ್ ಕಂದಾಯ ಡಾ ಎಚ್ ಸಿ ಮಹದೇವಪ್ಪ ಲೋಕೋಪಯೋಗಿ ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಎಚ್ ಎಸ್ ಮಹಾದೇವ ಪ್ರಸಾದ್ ಸಹಕಾರ ಎಂ ಎಚ್ ಅಂಬರೀಶ್ ವಸತಿ ಸತೀಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ ವಿನಯ್ ಕುಮಾರ್ ಸೊರಕೆ ನಗರಾಭಿವೃದ್ಧಿ ಎಂ ಬಿ ಪಾಟೀಲ್ ಜನಸಂಪನ್ಮೂಲ ಯು ಟಿ ಖಾದರ್ ಆರೋಗ್ಯ, ಕುಟುಂಬ ಕಲ್ಯಾಣ ಬಾಬುರಾವ್ ಚಿಂಚನಸೂರು ಜವಳಿ ಶಿವರಾಜ್ ತಂಗಡಗಿ ಸಣ್ಣ ನೀರಾವರಿ ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಎಸ್.ಆರ್.ಪಾಟೀಲ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ ಡಿ.ಕೆ. ಶಿವಕುಮಾರ್ ಇಂಧನ ರೋಶನ್ ಬೇಗ್ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ ಎ ಮಂಜು ಪಶುಸಂಗೋಪನೆ ವಿನಯ್‌ ಕುಲಕರ್ಣಿ; ಗಣಿ ಮತ್ತು ಭೂವಿಜ್ಞಾನ ಮನೋಹರ್ ಹೆಚ್ ತಹಸೀಲ್ದಾರ್ ಅಬಕಾರಿ ರಾಜ್ಯ ಸಚಿವರು ಅಭಯಚಂದ್ರ ಜೈನ್ ಯುವಜನ ಮತ್ತು ಕ್ರೀಡೆ, ಮೀನುಗಾರಿಕೆ ದಿನೇಶ್ ಗುಂಡೂರಾವ್ ಆಹಾರ ಮತ್ತು ನಾಗರಿಕ ಪೂರೈಕೆ ಕೃಷ್ಣ ಭೈರೇಗೌಡ ಕೃಷಿ ಡಾ ಶರಣಪ್ರಕಾಶ್ ಪಾಟೀಲ್; ವೈದ್ಯಕೀಯ ಶಿಕ್ಷಣ ಕಿಮ್ಮನೆ ರತ್ನಾಕರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಉಮಾಶ್ರೀ ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ ಪಿ ಟಿ ಪರಮೇಶ್ವರ ನಾಯಕ್ ಕಾರ್ಮಿಕ ಪಟ್ಟಿ == ಪ್ರಾತಿನಿಧ್ಯ ವಿಂಗಡಣೆ == == ಹೊಸಬರ ಸಂಕ್ಷಿಪ್ತ ಪರಿಚಯ == ಹೊಸ ಸಚಿವರ ಸಂಕ್ಷಿಪ್ತ ಪರಿಚಯ (21-6-2016 ಮಂಗಳವಾರ): == ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್‍ರಿಂದ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಕೆ == ದಿ.18/07/2016:ಸೋಮವಾರ:ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಜೆ.ಜಾರ್ಜ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಾರ್ಜ್‌ ರಾಜೀನಾಮೆ ಪತ್ರ ಸಲ್ಲಿಸಿದರು.ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಕೆ.ಜೆ.ಜಾರ್ಜ್, ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಐಜಿಪಿ ಪ್ರಣವ್‌ ಮೊಹಾಂತಿ ಅವರು ಕಾರಣ ಎಂದು ಆರೋಪ ಮಾಡಿದ್ದರು. ಜಾರ್ಜ್ ಬಳಿ ಇದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮು.ಮಂ.ಯವರೇ ಇಟ್ಟುಕೊಂಡಿದ್ದಾರೆ. ಈ ಸಂಬಂಧ ಗಣಪತಿ ಅವರ ಪುತ್ರ ನೇಹಾಲ್ ದಾಖಲಿಸಿದ್ದ ಖಾಸಗಿ ದೂರನ್ನು ಸೋಮವಾರ ವಿಚಾರಣೆ ನಡೆಸಿದ ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ, ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಕಡ್ಡಾಯ ರಜೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸುಗಮ ತನಿಖೆಗೆ ರಾಜೀನಾಮೆ: ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ತನಿಖೆ ಸುಗಮವಾಗಿ ನಡೆಯಲು ರಾಜೀನಾಮೆ ನೀಡಿದ್ದೇನೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ. ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಕೆ. ಗಣಪತಿ, ಜುಲೈ 7 ರಂದು ಒಂದು ಲಾಡ್ಜ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಜಾರ್ಜ್ ಹಾಗೂ ಎರಡು ಐಪಿಎಸ್ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾಗಿ ಹೇಳಿದ್ದರು. ಇದರಿಂದ ಕಾಂಗ್ರೆಸ್ ಆಳ್ವಿಕೆ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಯಿತು. == ಎಂ ಕೃಷ್ಣಪ್ಪ ನೂತನ ಸಚಿವ == ಸೆಪ್ಟೆಂಬರ್, 05,2016: ಗಣೇಶ ಹಬ್ಬದ ದಿನದಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ನೂತನ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣಪ್ಪ ಪ್ರಮಾಣ ವಚನ ತೆಗೆದುಕೊಂಡರು. ಎಂ. ಕೃಷ್ಣಪ್ಪ ಅವರನ್ನು ಒಕ್ಕಲಿಗ ಕೋಟಾದಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು ವಸತಿ ಖಾತೆಯ ಜವಾಬ್ದಾರಿ ವಹಿಸುವ ಸಾಧ್ಯತೆ ಹೆಚ್ಚಿದೆ ಪಶು ಸಂಗೋಪನಾ ಖಾತೆ ಸಚಿವ ಅರಕಲಗೂಡು ಮಂಜು ಹಾಗೂ ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬಡ್ತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರಿಂದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಾಗಿ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಖಾಲಿ ಉಳಿದಿದ್ದವು. ಎರಡೂ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗದ ಸಿದ್ದರಾಮಯ್ಯ, ಒಂದನ್ನು ಖಾಲಿ ಉಳಿಸಿಕೊಂಡಿದ್ದಾರೆ. == ಶಾಸಕ ಕೆ.ಜೆ. ಜಾರ್ಜ್‌ ಅವರು ಇಂದು ಮರಳಿ ಸಂಪುಟಕ್ಕೆ == ದಿ.26-9-2016ಸೋಮವಾರ ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜು.೧೮ ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ. == ಮಂತ್ರಿಮಂಡಲ ಪುನರ್ರಚನೆ ಮತ್ತು ಖಾತೆ ಮರು ಹಂಚಿಕೆ == ದಿ.೧-೯-೨೦೧೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲ ಪುನರ್ರಚನೆಮಾಡಿ ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ. ಜಿ. ಪರಮೇಶ್ವರ ಅವರಿಂದ ತೆರವಾದ ಗೃಹ ಖಾತೆಯನ್ನು (ಹೊಸ ಸೇರ್ಪಡೆ) ರಾಮಲಿಂಗಾರೆಡ್ಡಿಗೆ ಕೊಡಲಾಗಿದೆ. ಸಂಪುಟಕ್ಕೆ ಹೊಸತಾಗಿ ಸೇರಿದ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪೂರ ಅವರಿಗೆ ಅಬಕಾರಿ ಖಾತೆ. ಸಂಪುಟಕ್ಕೆ ಹೊಸತಾಗಿ ಸೇರಿದ, ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್‌) ಅವರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೌಶಲ್ಯ ಅಭಿವೃದ್ಧಿ ಹೊಣೆ. ಸಣ್ಣ ಕೈಗಾರಿಕೆ ಖಾತೆ ಹೊಂದಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹಕಾರ ಖಾತೆ. ಸಂಪುಟಕ್ಕೆ ಹೊಸತಾಗಿ ಸೇರಿದ, ಎಚ್‌.ಎಂ. ರೇವಣ್ಣ ಅವರಿಗೆ ಸಾರಿಗೆ ಖಾತೆ, ಅಬಕಾರಿ ಖಾತೆ; ರಾಜ್ಯ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆಯವರಿಗೆ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ), ರುದ್ರಪ್ಪ ಮಾನಪ್ಪ ಲಮಾಣಿ -(ಜವಳಿ ಮತ್ತು ಮುಜರಾಯಿ), ಖಾತೆ. ಪ್ರಮೋದ್‌ ಮಧ್ವರಾಜ್‌ (ಯುವಜನ ಸೇವೆ ಮತ್ತು ಮೀನುಗಾರಿಕೆ) ಖಾತೆ. ಈಶ್ವರ ಬಿ. ಖಂಡ್ರೆ ( ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ) ಅವರಿಗೆ ಸಂಪುಟ ದರ್ಜೆ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. === ಹೊಸ ಸಂಪುಟ ರಚನೆ ಸೆಪ್ಟಂಬರ್ ೨೦೧೭ === ಸಿದ್ದರಾಮಯ್ಯ: ಮುಖ್ಯಮಂತ್ರಿ; ಸಿಬ್ಬಂದಿ; ಆಡಲಿತ ಸುಧಾರಣೆ; ಸಣ್ಣ ಉಳಿತಾಯ,-ಲಾಟರಿ; ಗುಪ್ತದಳ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ. ರಾಮಲಿಂಗರೆಡ್ಡಿ: –ಗೃಹ. ಆರ್ ವಿ ದೇಶಪಾಂಡೆ ಬೃಹತ್ ಮತ್ತುಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಟಿ ಬಿ ಜಯಚಂದ್ರ : ಕಾನೂನು ಸಂಸದೀಯ ವ್ಯವಹಾರಗಳು ; ಸಣ್ನ ನೀರಾವರಿ ರಮಾನಾಥ ರೈ: ಅರಣ್ಯ, ಪರಿಸರ ಎಚ್ ಕೆ ಪಾಟೀಲ್: ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್ ಡಾ ಎಚ್ ಸಿ ಮಹದೇವಪ್ಪ: ಲೋಕೋಪಯೋಗಿ; ಬಂದರು; ಒಳನಾಡು; ಕೆ ಜೆ ಜಾರ್ಜ್ : ಬೆಂಗಳೂರು ನಗರಾಭಿವೃದ್ಧಿ ನಗರ ಯೋಜನೆ; ಯು ಟಿ ಖಾದರ್: ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ; ಎಂ ಬಿ ಪಾಟೀಲ್: ಜನಸಂಪನ್ಮೂಲ ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ರೋಶನ್ ಬೇಗ್: ನಗರಾಭಿವೃದ್ಧಿ, ಹಾಗೂ ಹಜ್ ಖಾತೆ ಡಿ.ಕೆ.ಶಿವಕುಮಾರ್ :ಇಂಧನ ಉಮಾಶ್ರೀ :ಮಹಿಳಾಮತ್ತು ಮಕ್ಕಳ ಅಭಿವೃದ್ಧಿ; ವಿಕಲಚೇತನ ಹಾಗೂ ಹಿರಿಯ ನಾಗರಕರು; ಸಂಸ್ಕೃತಿ; ಕೃಷ್ಣಬೈರೇಗೌಡ : ಕೃಷಿ ರಮೇಶ್ ಜಾರಕಿಹೊಳಿ: ಸಹಕಾರ ಎಂ.ಆರ್.ಸೀತಾರಾಂ :ಯೋಜನೆ ಮತ್ತು ಸಾಂಖಿಕ; ವಿಜ್ಞಾನ ಮತ್ತು ತಂತ್ರಜ್ಞಾನ. ಸಂತೊಷ್ ಎಸ್ ಲಾಡ್ : ಕಾರ್ಮಿಕ; ಕೌಶಲ ಅಭಿವೃದ್ಧಿ; ಬಸವರಾಜ ರಾಯರೆಡ್ಡಿ: ಉನ್ನತ ಶಕ್ಷಣ; ಎಂ.ಕೃಷ್ಣಪ್ಪ : ವಸತಿ; ವಿನಯ ಕುಲಕರ್ಣಿ : ಗಣಿ ಮತ್ತು ಭೂವಿಜ್ಞಾನ; ಎ. ಮಂಜು : ಪಶುಸಂಗೋಪನೆ ರೇಷ್ಮೆ ಪ್ರಿಯಾಂಕ ಖರ್ಗೆ :ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ; ಪ್ರವಾಸೋದ್ಯಮ; ರುದ್ರಪ್ಪ ಮಾನಪ್ಪ ಲಮಾಣಿ :ಜವಳಿ ಮತ್ತು ಮುಜರಾಯಿ; ಈಶ್ವರ ಬಿ ಖಂಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ಯಮೆಗಳು; ಪ್ರಮೋದ ಮಧ್ವರಾಜ್ :ಯುವಜನ ಮತ್ತು ಮೀನುಗಾರಿಕೆ; ಎಚ್.ಎಂ.ರೇವಣ್ಣ :ಸಾರಿಗೆ; ಆರ್.ಬಿ.ತಿಮ್ಮಾಪುರ :ಅಬಕಾರಿ ಎಂ.ಸಿ. ಮೊಹನಕುಮಾರಿ : ಸಣ್ನಕೈಗಾರಿಕೆ ; ಸಕ್ಕರೆ. == ಸದಸ್ಯರ ಪಟ್ಟಿ == === ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದವರು === . ಈ ಸದಸ್ಯರು ನಿಧನರಾಗಿದ್ದು ೨೦೧೬ರ ಉಪಚುನಾವಣೆಯಲ್ಲಿ ಬೇರೆ ಸದಸ್ಯರು ಆಯ್ಕೆಯಾಗಿದ್ದಾರೆ. ವಿವರಗಳಿಗೆ ಇದೇ ಪುಟದ ಮೇಲಿನ ೨೦೧೬ರ ಉಪಚುನಾವಣೆ ನೋಡಿ. 3-9-2014: ://....///membersaddress_kan. ://....///. == ಮಂತ್ರಿಮಂಡಲದಲ್ಲಿ ಬದಲಾವಣೆ == ತುಂಬಬೇಕು- == ನೋಡಿ == ಕರ್ನಾಟಕ ಸರ್ಕಾರ ೪.ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ == ಆಧಾರ/ಉಲ್ಲೇಖಗಳು == ೧.ಎಲೆಕ್ಷನ್ ಕಮಿಶನ್ ಕರ್ನಾಟಕ ಚುನಾವಣೆ ಆಯೋಗ ಪರಿಷ್ಕೃತ ಪಟ್ಟಿ ನೋಡಬೇಕು ೨.ಪ್ರಜಾವಾಣಿ & ಹಿ.ಟೈಮ್ಸ್ ೨೬-೮-೨೦೧೪ ೩.://..///---2013-/ ೪.ಉಪಚುನಾವಣೆ ೧೬/೨/೨೦೧೬/02/16/2016/ಪ್ರರಜಾವಾಣಿ: ೫. [೩] == ಹೊರಗಿನ ಕೊಂಡಿಗಳು == : 2008-05-29 ವೇಬ್ಯಾಕ್ ಮೆಷಿನ್ ನಲ್ಲಿ.